Dr Bharathi Maravanthe - ಡಾ. ಭಾರತಿ ಮರವಂತೆ
ಡಾ. ಭಾರತಿ ಮರವಂತೆ, ರಂಗೋಲಿ ಕಲಾವಿದೆ

                                                

“ನೆಲಮೂಲ ಕಲೆ-ಸಾಹಿತ್ಯ-ಸಂಸ್ಕೃತಿ “ಯ ಅಭಿಮಾನಿಗಳಿಗೆ ನನ್ನ ಅಧಿಕೃತವಾದ “ರಂಗೋಲಿಜಾನಪದ ಡಾಟ್ ಕಾಮ್” ವೆಬ್ ಸೈಟ್ ಗೆ ಪ್ರೀತಿಪೂರ್ವಕ ಮತ್ತು ಗೌರವಪೂರ್ವಕ ಸ್ವಾಗತ. ಭಾರತದಲ್ಲಿ ದಿನ ಬೆಳಗಾದರೆ ಮನೆಯ ಅಂಗಳದಲ್ಲಿ ಕೋಟಿ ಕೋಟಿ ರಂಗೋಲಿಗಳು ಅರಳುತ್ತವೆ, ಸಂಜೆ ನಶಿಸುತ್ತವೆ. ರಂಗೋಲಿ ಕಲೆಯ ಆಳ, ವಿಸ್ತಾರ, ವ್ಯಾಪಕತೆ ಅದರ ಬೇರನ್ನು ಶೋಧಿಸ ಹೊರಟರೆ ಆದಿಮಾನವನ ಚಿತ್ರಕಲೆ ಮತ್ತು ಬುಡಕಟ್ಟು ಸಮುದಾಯದ ಚಿತ್ರಗಳತ್ತ ಗಮನಹರಿಸಬೇಕಾಗುತ್ತದೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ಚೌಕಟ್ಟಿನ ಪರಿಧಿಯಲ್ಲಿ ಬೆಳೆದು ಬಂದಿರುವ ರಂಗೋಲಿ ಕಲೆಗೆ ಮೂಲದಲ್ಲಿ ಸೇಡಿ ಬರೆಯುವುದು, ಗೀಟ್ ಹಾಕುವುದು, ಹಸೆ ಬರೆಯುವುದು, ಚಿತ್ತಾರ ಬರೆಯುವುದು ಇತ್ಯಾದಿ ಹೆಸರುಗಳಿಂದ ಕರೆಯುತ್ತಿದ್ದರು ಎನ್ನುವುದು ಕ್ಷೇತ್ರಕಾರ್ಯ-ಸಂಶೋಧನೆಯ ಮೂಲಕ ಕಂಡುಕೊಂಡಿದ್ದೇನೆ. ರಂಗೋಲಿ ಕಲೆ ಕೂಡಾ ಒಂದು ನಿರ್ಧಿಷ್ಟ ಸಂದೇಶ ಸಾರುವ ಪ್ರದರ್ಶನಾತ್ಮಕ ಜಾನಪದ ಕಲೆ ಎನ್ನುವ ನನ್ನ ಒಳಧ್ವನಿಯನ್ನು ತಾವುಗಳು ಗುರುತಿಸಿದ್ದೀರಿ, ಅನೇಕ ವೇದಿಕೆಗಳನ್ನು, ಅವಕಾಶಗಳನ್ನು ನೀಡಿದ್ದೀರಿ. ನನ್ನ ನೆಚ್ಚಿನ ಉಪನ್ಯಾಸಕ ವೃತ್ತಿಯೊಂದಿಗೆ ಪ್ರವೃತಿಯಲ್ಲಿ ಹವ್ಯಾಸವಾಗಿ ೧೫ ವರ್ಷಗಳಿಂದ ಜಾನಪದ ಕಲೆಯಾದ ರಂಗೋಲಿ-ಸೇಡಿ-ಹಸೆ ಚಿತ್ತಾರದ ಕ್ಷೇತ್ರದಲ್ಲಿ ಸಂಶೋಧನೆ, ಅಧ್ಯಯನ-ಬೃಹತ್ ರಂಗೋಲಿ ಕಲಾ ಪ್ರದರ್ಶನ, ರಂಗೋಲಿಗಾಗಿಯೇ ಪತ್ರಿಕೆ, ಪ್ರಯೋಗಗಳು , ಕಲಾ ಪ್ರಾತ್ಯಕ್ಷಿಕೆ, ಸಾವಿರಾರು ವಿದ್ಯಾರ್ಥಿಗಳಿಗೆ ಈ ಕಲೆಯ ಮಾಹಿತಿ-ತರಬೇತಿ, ಬರವಣಿಗೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಾಗ ಪ್ರೋತ್ಸಾಹಿಸಿ ಹರಸಿದ್ದೀರಿ. ತಮ್ಮೆಲ್ಲರ ಪ್ರೀತಿ, ಸಲಹೆ , ಮಾರ್ಗದರ್ಶನದಿಂದಲೇ ಈ ಕ್ಷೇತ್ರದಲ್ಲಿ ಒಂದು ಚುಕ್ಕೆಯಷ್ಟು ಕೆಲಸ ಮಾಡಲು ಸಾಧ್ಯವಾಗಿದೆ. ಒಂದು ಹಂತದವರೆಗೆ ನನ್ನನ್ನು ಬೆಳೆಸಿದ – ಬೆಳೆಸುತ್ತಿರುವ ತಮಗೆಲ್ಲರಿಗೂ ನಾನು ಮನದಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಸದಾ ತಮ್ಮ ಪ್ರೋತ್ಸಾಹ, ತಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ.

ಪ್ರೇರಕರು : ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ.ಡಾ. ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ.

  • ಪ್ರೊ.ಕನರಾಡಿ ವಾದಿರಾಜ ಭಟ್ , ನಿವೃತ್ತ ಪ್ರಾಂಶುಪಾಲರು,ಶ್ರೀ.ಶಾರದಾಕಾಲೇಜು,
  • ಡಾ.ಅಕ್ಕಮಹಾದೇವಿ, ಪ್ರಾಧ್ಯಾಪಕರು, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯ
  • ಯು.ಎಸ್.ಶೆಣ್ಯ್.ಸಂಪಾದಕರು, ಕುಂದಪ್ರಭ ವಾರ ಪತ್ರಿಕೆ, ಕುಂದಾಪುರ
  • ಶ್ರೀ . ಹರೀಶ್ ಎಂ .ಎಂ, ವಕೀಲರು, ಕುಂದಾಪುರ
  • ಡಾ.ಗಣನಾಥ ಎಕ್ಕಾರ್, ಪ್ರಾಧ್ಯಾಪಕರು, ಜಾನಪದ ಸಂಶೋಧಕರು, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳು,
  • ಶ್ರೀ ಲಕ್ಷ್ಮೀ ಬಾಯಿ ಕಟಪಾಡಿ, ನಿವೃತ್ತ ಪ್ರಾಂಶುಪಾಲರು, ಕಟಪಾಡಿ, ಉಡುಪಿ ಜಿಲ್ಲೆ
  • ಡಾ.ನಿಕೇತನ, ಪ್ರಾಂಶುಪಾಲರು, ಸರ್ಕಾರಿ ಕಾಲೇಜು ಹಿರಿಯಡಕ, ಉಡುಪಿ ಜಿಲ್ಲೆ
  • ಡಾ.ಕೆಂಚನೂರು ಶಂಕರ್ , ರಂಗಭೂಮಿ ಕಲಾವಿದರು, ಬೆಂಗಳೂರು
  • Dr.S.Balaji president of kannada janapada parishath bengalore

ಈ ನೆಲ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನೆಲೆಯಲ್ಲಿ “ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ” ಸ್ಥಾಪಿತವಾಗಿದೆ . ಪ್ರಸ್ತುತ ಇದೇ ನನ್ನ ವೃತ್ತಿ ಕ್ಷೇತ್ರ. ಇಲ್ಲಿಯ ಕುಲಪತಿಗಳಾಗಿದ್ದ ಪ್ರೊ.ಅಂಬಳಿಕೆ ಹಿರಿಯಣ್ಣ, ಪ್ರೊ.ಚಿನ್ನಪ್ಪ ಗೌಡ ಅವರ ಪ್ರೋತ್ಸಾಹ ಸಲಹೆ ಮಾರ್ಗದರ್ಶನಕ್ಕೆ ಕೃತಜ್ಞತೆಗಳು. ಹಿರಿಯ ಅಧಿಕಾರಿಗಳಾಗಿದ್ದ ಪ್ರೊ.ಸ.ಚಿ.ರಮೇಶ್, ಪ್ರೊ.ಪ್ರೇಮ್ ಕುಮಾರ್, ಪ್ರೊ.ಮುರಹರಿ ನಾಯಕ್ ಇವರ ಮಾರ್ಗದರ್ಶನಕ್ಕೂ ಋಣಿಯಾಗಿದ್ದೇನೆ. ಪ್ರಸ್ತುತ ಕುಲಪತಿಗಳಾಗಿರುವ ಪ್ರೊ.ಡಿ .ಬಿ.ನಾಯಕ್, ಕುಲಸಚಿವರಾಗಿರುವ ಪ್ರೊ.ಚಂದ್ರಶೇಖರ್ , ಮೌಲ್ಯಮಾಪನ ಕುಲಸಚಿವರಾಗಿರುವ ಡಾ.ಎಂ.ಎನ್.ವೆಂಕಟೇಶ್ ಇವರೆಲ್ಲರ ಮಾರ್ಗದರ್ಶನ, ಸಲಹೆ ಸೂಚನೆಗಳಿಗೆ ಆಭಾರಿಯಾಗಿದ್ದೇನೆ. ರಂಗೋಲಿ ಕಲೆಯನ್ನು ವಿವಿಧ ದೃಷ್ಟಿಕೋನಗಳಿಂದ, ವಿವಿಧ ನೆಲೆಯಲ್ಲಿ ಯೋಚಿಸುವಂತೆ ಮಾಡುತ್ತಿರುವ ಗುರುಗಳಾದ ಪ್ರೊ.ಚಂದ್ರಪೂಜಾರಿ ಸರ್ ಅವರಿಗೆ ಮನದಾಳದ ಕೃತಜ್ಞತೆಗಳು. ಸದಾ ನನಗೆ ಪ್ರೋತ್ಸಾಹ ನೀಡುತ್ತಿರುವ ಉಡುಪಿಯ ಚಿತ್ರಕಲಾಮಂದಿರದ ನಿರ್ದೇಶಕರಾದ ಡಾ.ಯು.ನಿರಂಜನ, ಚಿತ್ರಕಲಾ ಅಭ್ಯಾಸದ ಸಂದರ್ಭದಲ್ಲಿ ಗುರುಗಳಾಗಿದ್ದ ಶ್ರೀ. ವಿಶ್ವೇಶ್ವರ ಪರ್ಕಳ, ಶ್ರೀ ಮೋಹನ್ ಕಡಬ, ಶ್ರೀ.ಕೆ.ಎಲ್.ಭಟ್ ಇವರೆಲ್ಲರ ಪ್ರೋತ್ಸಾಹಕ್ಕೂ ಕೃತಜ್ಞತೆಗಳು.ರಂಗೋಲಿ ಕಲೆಯಲ್ಲಿ ನಾನು ಕೆಲಸ ಮಾಡಿದ ಸಂದರ್ಭದಲ್ಲಿತಮ್ಮ ವಿವಿಧ ಪತ್ರಿಕೆಗಳಲ್ಲಿ, ಆಕಾಶವಾಣಿ , ದೂರದರ್ಶನದಲ್ಲಿ ಪರಿಚಯಿಸಿ ಪ್ರಕಟಿಸಿ, ಪ್ರೋತ್ಸಾಹಿಸಿ ಬೆಳೆಸುತಿರುವ ಎಲ್ಲಾ ಮಾಧ್ಯಮ ಬಳಗದವರಿಗೆ , ನನ್ನ ಪ್ರತಿಯೊಂದೂ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತಿರುವ ಅಮ್ಮ ಸುಶೀಲ , ತಂದೆ ಶೇಷಗಿರಿ, ತಮ್ಮ ವಿಶ್ವನಾಥ್, ಅಕ್ಕ ಲಲಿತಾಶ್ರೀ, ತಂಗಿ ಆಶಾಲತಾ ಅತ್ತೆ,ಮಾವ, ಚಿಕ್ಕಮ್ಮ ಚಿಕ್ಕಪ್ಪ, ಬಂಧುಗಳು, ಮತ್ತು ಸುಂದರವಾಗಿ ವೆಬ್ಸೈಟ್ ತಯಾರಿಸಿ, ಹೆಜ್ಜೆ ಹೆಜ್ಜೆಗೂ ಸಹಕಾರ ನೀಡಿದ “ಅಕ್ಷಜಾ ಡಿಸ್ಯಾನ್ ಸ್ಟುಡಿಯೋ ಕುಂದಾಪುರ” ಇವರೆಲ್ಲರಿಗೂ ನಾನು ಭಾರಿಯಾಗಿದ್ದೇನೆ. .ಡಾ.ಭಾರತಿ ಮರವಂತೆ