ನೆಲಮೂಲ ಸಂಸ್ಕೃತಿ -ಕಲೆ -ಸಾಹಿತ್ಯ ವಿಶೇಷವಾಗಿ ಕಂಡುಬರುವುದು ಬುಡಕಟ್ಟುಜನಸಮುದಾಯದವರಲ್ಲಿ. ಇವರ ಕುಣಿತ ಹಾಡು ನಂಬಿಕೆಗಳು ಸಂಪ್ರದಾಯಗಳು ಎಲ್ಲವೂ ವಿಶೇಷ. ನಾನು ಸಂಶೋಧನೆಯಲ್ಲಿ ತೊಡಗಿಕೊಂಡಾಗ ಉತ್ತರಕನ್ನಡದಲ್ಲಿ ಶ್ರೀಮತಿ ಶಾಂತಿನಾಯಕ್ ಇವರ ಸಹಕಾರದಲ್ಲಿ ಹಾಲಕ್ಕಿಗಳು, ದೀವರು, ಗಾಮೊಕ್ಕಲಿಗರನ್ನನು ಸಂದರ್ಶನ ಮಾಡಿದ್ದೆ. ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಅವರ ನಿಷ್ಠೆ, ಶ್ರದ್ದೆ, ಪ್ರಾಮಾಣಿಕ ಪ್ರಯತ್ನ ನೋಡಿದಾಗ ನಿಜವಾಗಿ ಮೂಲ ಸಂಸ್ಕೃತಿಯನ್ನು ಉಳಿಸುತ್ತಿರುವವರು ಇವರೇ ಆಗಿದ್ದಾರೆ. ನಗರದ ಸಂಸ್ಕೃತಿಯಲ್ಲಿ ನಾವುಗಳು ಮೂಲವನ್ನು ಬಿಟ್ಟು ನಮ್ಮದೇ ಆದ ನಮಗೆ ಅನುಕೂಲ ವಾಗುವಂತೆ ಅದನ್ನು ಬದಲಾಯಿಸಿಕೊಂಡಿದ್ದೇವೆ. ಜಾನಪದ ವಿದ್ವಾಂಸರೊಬ್ಬರು ಹೇಳಿದಂತೆ “ಜಾನಪದವು ಯಾವಾಗ ತನ್ನ ಸ್ವಂತಿಕೆ ಅಂದರೆ ಮೂಲ ತನವನ್ನು ಕಳೆದುಕೊಳ್ಳುತ್ತದೋ ಆಗ ಅದು ಖೋಟಾ ಜಾನಪದ ಆಗುತ್ತದೆ” ಇದು ನನಗೆ ತುಂಬ ಪರಿಣಾಮ ಬೀರಿದ ಸಂಗತಿ. ಜನಪದದ ಮೂಲವನ್ನು ನಾವು ಬುಡಕಟ್ಟು ಜನರಲ್ಲಿ ಕಾಣುತ್ತೇವೆ.

ಬುಡಕಟ್ಟು ಜನಸಮುದಾಯ :

ಇಲ್ಲಿ ಎರಡು ರೀತಿಯಲ್ಲಿ ವರ್ಗೀಕರಣ ಮಾಡಿಕೊಂಡಿದ್ದೇನೆ.
೧. ಬುಡಕಟ್ಟು ಕಲಾವಿದರ ಕುರಿತಾಗಿ ಪರಿಚಯ
೨. ಗ್ರಾಮೀಣ ಪ್ರದೇಶದಲ್ಲಿ ಅವರೊಂದಿಗೆ ನಿತ್ಯ ಬದುಕಿನಲ್ಲಿ ಉಳಿಸಿಕೊಂಡು ಬಂದಿರುವ ಕಲಾವಿದರ ಪರಿಚಯ
೩. ಜನಪದ ಕಲೆಗಳನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರ ಪರಿಚಯ
ಹೀಗೆ ವರ್ಗೀಕರಿಸಿಕೊಂಡು ವಿಷಯಗಳನ್ನು ಬಿತ್ತರಿಸುವ ಪ್ರಯತ್ನದತ್ತ ನಮ್ಮ ಹೆಜ್ಜೆ

ಉತ್ತರಕನ್ನಡದ ಬುಡಕಟ್ಟು ಜನಸಮುದಾಯದವರೊಡನೆ :

rangolijanapada.com, rangoli artist dr.bharathi maravanthe, hanumikshethra gowda gamokkaliga community, rangolijanapada.com
ಡಾ. ಭಾರತಿ ಮರವಂತೆ ಗಾಮೊಕ್ಕಲಿಗ ಸಮುದಾಯದ ಹನುಮಿ ಕ್ಷೇತ್ರ ಗೌಡ ಇವರನ್ನು ಸಂದರ್ಶನ ನಡೆಸುತ್ತಿರುವ ಸಂದರ್ಭ

ಗಾಮೊಕ್ಕಲಿಗರ ಹಸೆ ಚಿತ್ತಾರ :

rangolijanapada.com, rangoli artist dr.bharathi maravanthe, hanumikshethra gowda gamokkaliga community, rangolijanapada.com

ದೀವ ಬುಡಕಟ್ಟು ಜನಸಮುದಾಯದವರಲ್ಲಿ ಚಿತ್ತಾರ ಕಲೆ :

rangolijanapada.com, rangoli artist dr.bharathi maravanthe, diivara chittara, rangoli janapada.com

ನನ್ನಧ್ವನಿ : “ರಂಗೋಲಿ ಭಾರತದ ಶುಧ್ದ ಜನಪದ ಕಲೆಯಾಗಿದೆ, ಮೂಲತಹ ಇದಕ್ಕೆ “ಸೇಡಿ ಬರೆಯುವುದು” “ಗೀಟ್ ಹಾಕುವುದು” ಎನ್ನುತ್ತಿದ್ದರು. ಹಳ್ಳಿಯಲ್ಲಿ ಪ್ರತಿನಿತ್ಯ ಅಂಗಳದಲ್ಲಿ, ಹೊಸ್ತಿಲಿನಲ್ಲಿ ಜಾತಿ-ಮತ-ಕಟ್ಟುಪಾಡುಗಳನ್ನು ಮೀರಿ ಕೋಟಿ ಕೋಟಿ ರಂಗೋಲಿಗಳು ಅರಳುತ್ತವೆ, ಸಂಜೆ ಮುದುಡುತ್ತವೆ. ಇಂದಿಗೂ ಕೆಲವು ಹಳ್ಳಿಯ ಮುಗ್ಧ ಜನರು ಗೀಟ್ ಹಾಕುವುದು ಎನ್ನುವ ಪದ ಬಳಸುತ್ತಾರೆ. ಬುಡಕಟ್ಟು ಸಮುದಾಯದ ಗಾಮೊಕ್ಕಲಿಗರು ಸೇಡಿ ಬರೆಯುವುದು ಎನ್ನುವ ಪದ ಬಳಕೆಯಲ್ಲಿ ಗೋಡೆಯಲ್ಲಿ ಚಿತ್ರಿಸುತ್ತಾರೆ. ಹಾಲಕ್ಕಿ ಜನ ಸಮುದಾಯದವರು ಇಂದಿಗೂ ಹೊಸ್ತಿಲಿಗೆ ಸೇಡಿ ಮೂಲಕ ಹಲಿ ಬರೆಯುತ್ತಾರೆ. ರಂಗೋಲಿ ಕಲೆಯನ್ನು ಧಾರ್ಮಿಕ ಕಲೆ ಎಂದು ಬಿಂಬಿಸಲಾಗುತ್ತಿದೆ. ಆದರೆ ರಂಗೋಲಿಯ ವಿನ್ಯಾಸಗಳಲ್ಲಿ, ಉದ್ದೇಶಗಳಲ್ಲಿ ಧಾರ್ಮಿಕ ಅಂಶಗಳಿವೆ ನಿಜ. ನಮ್ಮ ಭಾರತದ ಎಲ್ಲಾ ಜನಪದ ಕಲೆಗಳಲ್ಲಿಯೂ ಮುಗ್ಧ ಜನರ ಭಕ್ತಿಯ,ಆರಾಧನೆಯ ಅಂಶಗಳನ್ನು ಕಾಣುತ್ತೇವೆ.ರಂಗೋಲಿ ಎನ್ನುವ ಪದ ಸಂಸ್ಕೃತೀಕರಣಗೊಂಡ ಪದವಾಗಿದೆ. ಈ ಕಾರಣಕ್ಕಾಗಿ ಈ ಕಲೆಯನ್ನು ಒಂದು ಸಮುದಾಯಕ್ಕೆ ಸಿಇಮಿತವಾದ ಕಲೆ ಎಂದು ಬಿಂಬಿಸಿದರೆ ಕಲೆಗೆ ಮಾಡುವ ಅನ್ಯಾಯವಾಗುತ್ತದೆ. ಈ ಕಳೆಯ ಇನ್ನೊಂದು ಮುಖವೇ “ಮಂಡಲಗಳು”. ಇದನ್ನೂ ಕೂಡಾ ಕಾಡ್ಯನಾಟದಂತಹ ಇನ್ನೂ ಅನೇಕ ಆಚರಣೆಗಳಲ್ಲಿ ಬುಡಕಟ್ಟು ಸಮುದಾಯದವರು ಮಂಡಲಗಳನ್ನು ರಚಿಸಿದ್ದು ದಾಖಲಾಗಿದೆ. ಭೂತಾರಾಧನೆಯಲ್ಲಿ ಚಿಕ್ಕ ಚಿಕ್ಕ ಮಂಡಲಗಳ ರೇಖೆಗಳನ್ನು ಚಿತ್ರಿಸುವುದು ಕಂಡು ಬರುತ್ತದೆ ಇನ್ನು “ಹಸೆ ಚಿತ್ತಾರ”ದ ಬಗ್ಗೆನೂ ಗೊಂದಲಗಳನ್ನು ಸೃಷ್ಟಿ ಮಾಡಲಾಗುತ್ತಿದೆ. “ಹಸೆ” ಎನ್ನುವ ಪದದ ಅರ್ಥವೇ ಚಾಪೆ ಎಂದಾಗಿದೆ. ಮದುವೆ ಸಂದರ್ಭದಲ್ಲಿ ಬಿಡಿಸುವ ಚಿತ್ರವೇ ಹಸೆ ಚಿತ್ತಾರವಾಗಿದೆ. ಬುಡಕಟ್ಟು ಸಮುದಾಯದವರು ವಿಶೇಷವಾಗಿ ಗೋಡೆ ಮೇಲೆ ಮತ್ತು ನೆಲದ ಮೇಲೆ ಚಿತ್ರಿಸುತ್ತಾರೆ. ನಾಗರೀಕತೆಗೆ ಒಗ್ಗಿಕೊಂಡ ಸಾಮಾನ್ಯ ಜನಸಮುದಾಯದವರು ಕರೆಯುವ ಹೆಸರುಗಳಲ್ಲಿ ಭಿನ್ನತೆಗಳಿವೆ” ರಂಗೋಲಿ ಕಲೆ ನಮ್ಮ ಭಾರತದ ವಿವಿಧ ರಾಜ್ಯಗಳಲ್ಲಿ ಪೂಕಳಂ, ಅಲ್ಪನಾ, ಕೋಲಮ್, ಮುಗ್ಗುಲು, ರಂಗೋಳಿ, ರಂಗೋಲಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ೨೦ ವರ್ಷಗಳಿಂದ ಈ ಕಲೆಯಲ್ಲಿನ “ಅಧ್ಯಯನ-ಸಂಶೋಧನೆಯ ಹಿನ್ನೆಲೆಯಲ್ಲಿ” ನಾನು ಕಂಡುಕೊಂಡ ಸತ್ಯವನ್ನು ಈ web site ಮೂಲ ಹೇಳ ಹೊರಟಿದ್ದೇನೆ.
ಆಧುನೀಕರಣದ ನಾಗಾಲೋಟದಲ್ಲಿ ನಾವಿಂದು ಇಂತಹ ಕಲೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಇದರ ನಡುವೆ ನಾವು ಮಾಡಿದ ಕೆಲಸವನ್ನು ಹೋರಾಟದ ಮೂಲಕ ನಮ್ಮತನವನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಇನ್ನೂ ಬೇಸರ ತರುತ್ತದೆ. ಉಡುಪಿಯ ರಂಗವಲ್ಲಿ ಬ್ರಹ್ಮ ಬಿ.ಪಿ.ಬಾಯಿರಿ ಸಾಕಷ್ಟು ರಂಗೋಲಿ ಚಿತ್ರಗಳನ್ನು ಸಂಗ್ರಹ ಮತ್ತು ಸ್ವರಚನೆ ಮಾಡಿದ್ದರು. ಆದರೆ ಇಂದು ಆ ಚಿತ್ರಗಳು ಯಾರದ್ದೋ ಹೆಸರಲ್ಲಿ ನಕಲಾಗಿಪ್ರಕಟಣೆಗೊಳ್ಳುತ್ತಿವೆ. ಇದು ಬಹಳ ಬೇಸರ ತರುವ ಸಂಗತಿ. ಈ ಕಾರಣಕ್ಕಾಗಿ ಈ website ನಲ್ಲಿ ಒಂದು blogಗೆ ಅವರಿಗೆ ಗೌರವ ಸಲ್ಲಿಸಲು ಅವರ ಹೆಸರನ್ನು ಇಟ್ಟಿದ್ದೇನೆ. ರಂಗೋಲಿ ಕೂಡಾ ಒಂದು ಜನಪದ ಕಲೆ. ಅವರವರ ಶ್ರಮ ಅವರವರಿಗೆ ಸಲ್ಲಬೇಕು”ರಂಗೋಲಿ ಕಲೆಯು ತನ್ನ ಮೂಲ ಸ್ವರೂಪವನ್ನು ಇಟ್ಟುಕೊಂಡು ಜಾಗತೀಕರಣಕ್ಕೆ ಅನುಗುಣವಾಗಿ ಬೆಳೆಯಬೇಕಾಗಿದೆ.ದಿನಬೆಳಗಾದರೆ ರಂಗೋಲಿ ಮೂಲಕ ಅರಳುವ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಮುಗ್ಧ ಮಕ್ಕಳು ಅರಿಯಬೇಕಾಗಿದೆ. ಈ ಕಲೆಯು ಶಾಲಾ ಶಿಕ್ಷಣದಲ್ಲಿ ಸೇರ್ಪಡೆಯಾಗಬೇಕು,. ಡಾ.ಭಾರತಿ ಮರವಂತೆ