ಕರ್ನಾಟಕ ರಂಗೋಲಿ ಕಲಾ ಪರಿಷತ್ ವಿಭಾಗದಿಂದ ರಂಗೋಲಿ ಆಸಕ್ತರಿಗೆ ಹಮ್ಮಿಕೊಂಡಿರುವ ವಿಶೇಷ ವೇದಿಕೆ ಇದಾಗಿದೆ

ರಚನೆ : ಡಾ.ಭಾರತಿ ಮರವಂತೆ, ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ ಪತ್ರಿಕೆಯವರಿಗೆ ಧನ್ಯವಾದಗಳು



ಸರಸ್ವತಿ ಪೂಜೆಗೆ ಹಾಕಬಹುದಾದ ರಂಗೋಲಿ, ಸಂಯುಕ್ತ ಕರ್ನಾಟಕ ಪತ್ರಿಕೆಯವರು ೨೦೧೮ರಲ್ಲಿ ಈ ರಂಗೋಲಿಯನ್ನು ಪ್ರಕಟಿಸಿದ್ದರು. ಪತ್ರಿಕಾ ಬಳಗದವರಿಗೆ ಧನ್ಯವಾದಗಳು.


ರಂಗೋಲಿ ಕಲಾ ಕಲಾ ಪರಿಷತ್ ವೇದಿಕೆ : ನೀವೂ ರಂಗೋಲಿ ಬರೆಯಿರಿ : ಇತರ ಕಲೆಗಳಂತೆ ಜನಪದ ಕಲೆಯಾದ ರಂಗೋಲಿ ಕಲೆಯೂ ಬೆಳೆಯಬೇಕು ಎನ್ನುವ ನೆಲೆಯಲ್ಲಿ ಈ “ರಂಗೋಲಿ ಕಲಾ ವೇದಿಕೆ”
ರಂಗೋಲಿ ಕಲಾವಿದರಿಗೆ ಇಲ್ಲೊಂದು ವೇದಿಕೆಯಿದೆ. ತಾವು ರಚಿಸಿದ ರಂಗೋಲಿಯನ್ನು ಇಲ್ಲಿ ಸೂಚಿಸಿದ ಇಮೇಲ್ ಗೆ ತಲುಪಿಸಿದರೆ ತಮ್ಮ ಹೆಸರಿನಲ್ಲಿಯೇ ಪ್ರತ್ಯೇಕ ವಿಭಾಗ ಮಾಡಿ ಆ ರಂಗೋಲಿಯನ್ನು ಪ್ರಕಟಿಸಲಾಗುವುದು.
ನಿಬಂಧನೆಗಳು :
೧. ಯಾರೂ ಬೇಕಾದರೂ ರಂಗೋಲಿ ಚಿತ್ರ ಕಳುಹಿಸಬಹುದು, ವಯಸ್ಸಿನ ನಿಬಂಧನೆ ಇರುವುದಿಲ್ಲ
೨. ರಂಗೋಲಿಯನ್ನು ತಾವು ಜನಪದರು ರಚಿಸಿದ ಸಾಂಪ್ರದಾಯಿಕ ರಂಗೋಲಿ ಸಂಗ್ರಹ ಮಾಡಿದ್ದರೆ / ಬುಡಕಟ್ಟು ಸಮುದಾಯದ ಚಿತ್ತಾರದ ಸಂಗ್ರಹ ಮಾಡಿದ್ದರೆ ಸಂಗ್ರಹ ಎನ್ನುವ ಶೀರ್ಷಿಕೆಯಲ್ಲಿಯೇ ತಾವು ಕಳುಹಿಸತಕ್ಕದ್ದು , ತಾವು ರಂಗೋಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾದರೆ ಅಲ್ಲಿ ಬಿಡಿಸಿದ ಸ್ಥಳ, ದಿನಾಂಕ, ಯಾವ ಸಂದರ್ಭದಲ್ಲಿ ಬಿಡಿಸಿದ್ದೀರಿ, ತಮ್ಮ ಸಂಪೂರ್ಣ ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಕಳುಹಿಸಬೇಕು. ಇವುಗಳೊಂದಿಗೆ ತಮ್ಮ ಭಾವಚಿತ್ರವನ್ನು ಕಳುಹಿಸತಕ್ಕದ್ದು,
೩. ತಾವೇ ರಂಗೋಲಿ ಚಿತ್ರವನ್ನು ರಚಿಸಿದ್ದಾದರೆ ಅದರಲ್ಲಿ ಸ್ವರಚಿತ ರಂಗೋಲಿ ಎಂದು ತಾವು ಬರೆದು ಕಳುಹಿಸಿರಿ
೪. ರಂಗೋಲಿ ಚಿತ್ರವನ್ನು ಹಾರ್ಡ್ ಪ್ರತಿಯನ್ನು ಸೂಚಿಸಿದ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇಮೇಲ್ ಗೆ ಕಳುಹಿಸಬಹುದು.
೫. ತಾವು ಕಳುಹಿಸಿದ ರಂಗೋಲಿ ಪ್ರಕಟಣೆಯಾಗುವಂತಿದ್ದರೆ ತಮ್ಮ ಹೆಸರು, ವಿಳಾಸ, ಭಾವಚಿತ್ರದೊಂದಿಗೆ ತಾವು ನೀಡಿದಂತೆ ಪ್ರಕಟಿಸುತ್ತೇವೆ
೬ ತಾವು ರಂಗೋಲಿ ಕಲಾವಿದರಾಗಿದ್ದಾರೆ ಅಥವಾ ಸುಂದರವಾದ ರಂಗೋಲಿ ರಚಿಸುವುದಾದರೆ ಅದನ್ನೂ ಫೋಟೋ ತೆಗೆದು ಕಳುಹಿಸಿರಿ
೭. ರಂಗೋಲಿಗೆ ಚುಕ್ಕೆಗಳ ವಿವರವಿರಲಿ
ವಿಶೇಷ ಸೂಚನೆ : ಬೇರೆ ರಂಗೋಲಿ ಕಲಾವಿದರು ರಚಿಸಿದ್ದನ್ನು ನಕಲು ಮಾಡಿ ತಮ್ಮ ಹೆಸರನ್ನು ಹಾಕಿ ಕಳುಹಿಸಿದರೆ ಅದನ್ನು ಪ್ರಕಟಿಸಲಾಗುವುದಿಲ್ಲ. ತಮ್ಮ ಹೆಸರು, ಊರು ಸ್ಪಷ್ಟ ನಮೂದಿಸಿರಬೇಕು, ಗೊಂದಲಗಳು ಕಡುಬಂದರೆ ಅವುಗಳನ್ನು ಪ್ರಕಟಿಸಲಾಗುವುದಿಲ್ಲ
ನಮ್ಮ ವಿಳಾಸ : 1. ಡಾ.ಭಾರತಿ ಮರವಂತೆ, ರಂಗೋಲಿ ಕಲಾ ಪರಿಷತ್, ಸುಶೀಲ ಶೇಷಗಿರಿ, ಹೊಸಮನೆ ಮರವಂತೆ, ಪೋಸ್ಟ್ ಮರವಂತೆ, ಕುಂದಾಪುರ ತಾ. ಉಡುಪಿ ಜಿಲ್ಲೆ, ೫೭೬೨೨೪, ಇಮೇಲ್ : baratim22@gmil.com, ವೆಬ್ ಸ್ಯೆಟ : ರಂಗೋಲಿಜನಪದ.
2. ವಿಶ್ವನಾಥ್ ರಂಗೋಲಿ ಕಲಾ ಪರಿಷತ್, ಸುಶೀಲ ಶೇಷಗಿರಿ, ಹೊಸಮನೆ ಮರವಂತೆ, ಪೋಸ್ಟ್ ಮರವಂತೆ, ಕುಂದಾಪುರ ತಾ. ಉಡುಪಿ ಜಿಲ್ಲೆ, ೫೭೬೨೨೪, ಇಮೇಲ್ : baratim22@gmil.com, ವೆಬ್ ಸ್ಯೆಟ : ರಂಗೋಲಿಜನಪದ

ನನ್ನಧ್ವನಿ : “ರಂಗೋಲಿ ಭಾರತದ ಶುಧ್ದ ಜನಪದ ಕಲೆಯಾಗಿದೆ, ಮೂಲತಹ ಇದಕ್ಕೆ “ಸೇಡಿ ಬರೆಯುವುದು” “ಗೀಟ್ ಹಾಕುವುದು” ಎನ್ನುತ್ತಿದ್ದರು. ಹಳ್ಳಿಯಲ್ಲಿ ಪ್ರತಿನಿತ್ಯ ಅಂಗಳದಲ್ಲಿ, ಹೊಸ್ತಿಲಿನಲ್ಲಿ ಜಾತಿ-ಮತ-ಕಟ್ಟುಪಾಡುಗಳನ್ನು ಮೀರಿ ಕೋಟಿ ಕೋಟಿ ರಂಗೋಲಿಗಳು ಅರಳುತ್ತವೆ, ಸಂಜೆ ಮುದುಡುತ್ತವೆ. ಇಂದಿಗೂ ಕೆಲವು ಹಳ್ಳಿಯ ಮುಗ್ಧ ಜನರು ಗೀಟ್ ಹಾಕುವುದು ಎನ್ನುವ ಪದ ಬಳಸುತ್ತಾರೆ. ಬುಡಕಟ್ಟು ಸಮುದಾಯದ ಗಾಮೊಕ್ಕಲಿಗರು ಸೇಡಿ ಬರೆಯುವುದು ಎನ್ನುವ ಪದ ಬಳಕೆಯಲ್ಲಿ ಗೋಡೆಯಲ್ಲಿ ಚಿತ್ರಿಸುತ್ತಾರೆ. ಹಾಲಕ್ಕಿ ಜನ ಸಮುದಾಯದವರು ಇಂದಿಗೂ ಹೊಸ್ತಿಲಿಗೆ ಸೇಡಿ ಮೂಲಕ ಹಲಿ ಬರೆಯುತ್ತಾರೆ. ರಂಗೋಲಿ ಕಲೆಯನ್ನು ಧಾರ್ಮಿಕ ಕಲೆ ಎಂದು ಬಿಂಬಿಸಲಾಗುತ್ತಿದೆ. ಆದರೆ ರಂಗೋಲಿಯ ವಿನ್ಯಾಸಗಳಲ್ಲಿ, ಉದ್ದೇಶಗಳಲ್ಲಿ ಧಾರ್ಮಿಕ ಅಂಶಗಳಿವೆ ನಿಜ. ನಮ್ಮ ಭಾರತದ ಎಲ್ಲಾ ಜನಪದ ಕಲೆಗಳಲ್ಲಿಯೂ ಮುಗ್ಧ ಜನರ ಭಕ್ತಿಯ,ಆರಾಧನೆಯ ಅಂಶಗಳನ್ನು ಕಾಣುತ್ತೇವೆ.ರಂಗೋಲಿ ಎನ್ನುವ ಪದ ಸಂಸ್ಕೃತೀಕರಣಗೊಂಡ ಪದವಾಗಿದೆ. ಈ ಕಾರಣಕ್ಕಾಗಿ ಈ ಕಲೆಯನ್ನು ಒಂದು ಸಮುದಾಯಕ್ಕೆ ಸಿಇಮಿತವಾದ ಕಲೆ ಎಂದು ಬಿಂಬಿಸಿದರೆ ಕಲೆಗೆ ಮಾಡುವ ಅನ್ಯಾಯವಾಗುತ್ತದೆ. ಈ ಕಳೆಯ ಇನ್ನೊಂದು ಮುಖವೇ “ಮಂಡಲಗಳು”. ಇದನ್ನೂ ಕೂಡಾ ಕಾಡ್ಯನಾಟದಂತಹ ಇನ್ನೂ ಅನೇಕ ಆಚರಣೆಗಳಲ್ಲಿ ಬುಡಕಟ್ಟು ಸಮುದಾಯದವರು ಮಂಡಲಗಳನ್ನು ರಚಿಸಿದ್ದು ದಾಖಲಾಗಿದೆ. ಭೂತಾರಾಧನೆಯಲ್ಲಿ ಚಿಕ್ಕ ಚಿಕ್ಕ ಮಂಡಲಗಳ ರೇಖೆಗಳನ್ನು ಚಿತ್ರಿಸುವುದು ಕಂಡು ಬರುತ್ತದೆ ಇನ್ನು “ಹಸೆ ಚಿತ್ತಾರ”ದ ಬಗ್ಗೆನೂ ಗೊಂದಲಗಳನ್ನು ಸೃಷ್ಟಿ ಮಾಡಲಾಗುತ್ತಿದೆ. “ಹಸೆ” ಎನ್ನುವ ಪದದ ಅರ್ಥವೇ ಚಾಪೆ ಎಂದಾಗಿದೆ. ಮದುವೆ ಸಂದರ್ಭದಲ್ಲಿ ಬಿಡಿಸುವ ಚಿತ್ರವೇ ಹಸೆ ಚಿತ್ತಾರವಾಗಿದೆ. ಬುಡಕಟ್ಟು ಸಮುದಾಯದವರು ವಿಶೇಷವಾಗಿ ಗೋಡೆ ಮೇಲೆ ಮತ್ತು ನೆಲದ ಮೇಲೆ ಚಿತ್ರಿಸುತ್ತಾರೆ. ನಾಗರೀಕತೆಗೆ ಒಗ್ಗಿಕೊಂಡ ಸಾಮಾನ್ಯ ಜನಸಮುದಾಯದವರು ಕರೆಯುವ ಹೆಸರುಗಳಲ್ಲಿ ಭಿನ್ನತೆಗಳಿವೆ” ರಂಗೋಲಿ ಕಲೆ ನಮ್ಮ ಭಾರತದ ವಿವಿಧ ರಾಜ್ಯಗಳಲ್ಲಿ ಪೂಕಳಂ, ಅಲ್ಪನಾ, ಕೋಲಮ್, ಮುಗ್ಗುಲು, ರಂಗೋಳಿ, ರಂಗೋಲಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ೨೦ ವರ್ಷಗಳಿಂದ ಈ ಕಲೆಯಲ್ಲಿನ “ಅಧ್ಯಯನ-ಸಂಶೋಧನೆಯ ಹಿನ್ನೆಲೆಯಲ್ಲಿ” ನಾನು ಕಂಡುಕೊಂಡ ಸತ್ಯವನ್ನು ಈ web site ಮೂಲ ಹೇಳ ಹೊರಟಿದ್ದೇನೆ.
ಆಧುನೀಕರಣದ ನಾಗಾಲೋಟದಲ್ಲಿ ನಾವಿಂದು ಇಂತಹ ಕಲೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಇದರ ನಡುವೆ ನಾವು ಮಾಡಿದ ಕೆಲಸವನ್ನು ಹೋರಾಟದ ಮೂಲಕ ನಮ್ಮತನವನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಇನ್ನೂ ಬೇಸರ ತರುತ್ತದೆ. ಉಡುಪಿಯ ರಂಗವಲ್ಲಿ ಬ್ರಹ್ಮ ಬಿ.ಪಿ.ಬಾಯಿರಿ ಸಾಕಷ್ಟು ರಂಗೋಲಿ ಚಿತ್ರಗಳನ್ನು ಸಂಗ್ರಹ ಮತ್ತು ಸ್ವರಚನೆ ಮಾಡಿದ್ದರು. ಆದರೆ ಇಂದು ಆ ಚಿತ್ರಗಳು ಯಾರದ್ದೋ ಹೆಸರಲ್ಲಿ ನಕಲಾಗಿಪ್ರಕಟಣೆಗೊಳ್ಳುತ್ತಿವೆ. ಇದು ಬಹಳ ಬೇಸರ ತರುವ ಸಂಗತಿ. ಈ ಕಾರಣಕ್ಕಾಗಿ ಈ website ನಲ್ಲಿ ಒಂದು blogಗೆ ಅವರಿಗೆ ಗೌರವ ಸಲ್ಲಿಸಲು ಅವರ ಹೆಸರನ್ನು ಇಟ್ಟಿದ್ದೇನೆ. ರಂಗೋಲಿ ಕೂಡಾ ಒಂದು ಜನಪದ ಕಲೆ. ಅವರವರ ಶ್ರಮ ಅವರವರಿಗೆ ಸಲ್ಲಬೇಕು”ರಂಗೋಲಿ ಕಲೆಯು ತನ್ನ ಮೂಲ ಸ್ವರೂಪವನ್ನು ಇಟ್ಟುಕೊಂಡು ಜಾಗತೀಕರಣಕ್ಕೆ ಅನುಗುಣವಾಗಿ ಬೆಳೆಯಬೇಕಾಗಿದೆ.ದಿನಬೆಳಗಾದರೆ ರಂಗೋಲಿ ಮೂಲಕ ಅರಳುವ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಮುಗ್ಧ ಮಕ್ಕಳು ಅರಿಯಬೇಕಾಗಿದೆ. ಈ ಕಲೆಯು ಶಾಲಾ ಶಿಕ್ಷಣದಲ್ಲಿ ಸೇರ್ಪಡೆಯಾಗಬೇಕು,. ಡಾ.ಭಾರತಿ ಮರವಂತೆ