“ಚಿತ್ತಾರ ಗ್ಯಾಲರಿ” ಇದು ನಮ್ಮ ನಿಮ್ಮ ಸೇಡಿ .ಹಲಿ . ಹಸೆ, ರಂಗೋಲಿ ಚಿತ್ರಗಳ ಸುಂದರ ಸಂಗ್ರಹಾಲಯವಿದ್ದಂತೆ. ರಂಗೋಲಿಗಾಗಿ ಒಂದು ವೆಬ್ ಸ್ಯೆಟ್ ತೆರೆಯಲು ಜಾಗತೀಕರಣ, ಅಭಿಮಾನಿ ಬಂಧುಗಳು, ಸಹೃದಯರು ಎಲ್ಲರೂ ಸನ್ನದ್ಧರಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರೆ ನನ್ನ ಅದೃಷ್ಟ ಎಂದೇ ಹೇಳಬೇಕು. ಸುಮಾರು ನನಗೆ ೧೮ ವರ್ಷ ಇದ್ದಾಗ ಬಿ.ಏ ಓದುತ್ತಿದ್ದಾಗ ರಂಗೋಲಿ ಪುಡಿ ಹಿಡಿದು ಹೊತ್ತುಕೊಂಡು ಅಡ್ಡಾಡಿದವಳು. ಅನಂತರ ಕಷ್ಟಪಟ್ಟು ಹಾಕಿದ ರಂಗೋಲಿ ಅಳಿಸಿ ಹಿಂತಿರುಗಬೇಕಲ್ಲ್ಯಾ ಎನ್ನುವ ಕೊರಗು ಮನಸ್ಸಲ್ಲಿತ್ತು. ಆದರೆ ರಂಗೋಲಿ ಒಂದು ಕ್ಷಣಿಕ ಕಲೆ ಎಷ್ಟೇ ಸುಂದರವಾದ ಹೂವು ಅರಳಿದರೂ ಅದು ಕೆಲವೇ ಕ್ಷಣಗಳಲ್ಲಿ – ಕೆಲವೇ ದಿನಗಳಲ್ಲಿ ಬಾಡಿ ಹೋಗುವಂತೆ ರಂಗೋಲಿ ಕೂಡ ಜನರು ನೋಡುತ್ತಾರೆ, ಸಂತೋಷ ಪಡುತ್ತಾರೆ ಅನಂತರ ಅಳಿಸಬೇಕಾಗುತ್ತದೆ, ಕೆಲವೊಂದು ಕಲೆಗಳು ಕೂಡಾ ಅದೇ ರೀತಿ ಎಂದೇ ಸಮಾಧಾನಪಡುತ್ತಿದ್ದೆ. ಅನಂತರ ಸಮಾಧಾನಕ್ಕಾಗಿ ನಾನು ರಚಿಸಿದ ರಂಗೋಲಿ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಾಗ ಒಂದಿಷ್ಟು ಸಮಾಧಾನ, ಮಾಡಿದ ಕೆಲಸ ಒಂದೆಡೆ ಉಳಿಯುತ್ತಿದೆ ಈ ಕಲೆಯನ್ನೂ ಗುರುತಿಸುವವರಿದ್ದಾರೆ ಎಂದು ಸಮಾಧಾನಗೊಂಡೆ. ಅನಂತರ ರಂಗೋಲಿ ಪೈಂಟಿಂಗ್ ತಂದಾಗ ಮುಡುಬಿದಿರೆಯ ಕಲಾ ಆರಾಧಕರಾದ ಡಾ.ಮೋಹನ್ ಆಳ್ವ ಅವರು ನನ್ನ ಪೈಂಟಿಂಗ್ ತೆಗೆದುಕೊಂಡಾಗ ಇನ್ನೂ ಸಮಾಧಾನ. ಈ ಪೈಂಟಿಂಗ್ ಶ್ರೀಕೃಷ್ಣ ಮಠದಲ್ಲಿ ಪ್ರದರ್ಶನಗೊಂಡಾಗ ಖ್ಯಾತ ರಾಷ್ತ್ರೀಯ ಚಿತ್ರ ಕಲಾವಿದರಾದ ಉಡುಪಿಯ ರಮೇಶ್ ರಾವ್ ಅವರು “ನೆಲದ ರಂಗೋಲಿ ಕ್ಯಾನ್ವಾಸ್ಗೆ ಏರಿತು” ಎಂದು ಸಂತೋಷ್ ವ್ಯಕ್ತಪಡಿಸಿದಾಗ ಇನ್ನಷ್ಟು ಪುಳಕಿತಳಾದೆ. ಅನಂತರ ಎಲ್ಲಾ ವಿಷಯಗಳಿಗೂ ವೇದಿಕೆ ಇರುವಂತೆ ರಂಗೋಲಿ ಕಲೆಗೂ ವೇದಿಕೆ ಬೇಕು ಎಂದು ನನ್ನ ಗುರುಗಳಾದ ಪ್ರೊ.ಕನರಾಡಿ ವಾದಿರಾಜ ಭಟ್ ಅವರಲ್ಲಿ ರಂಗೋಲಿ ಪತ್ರಿಕೆಯ ಸಲಹೆ ಕೇಳಿದಾಗ ಮುನ್ನಡೆ ಎಂದು ಬೆನ್ನು ತಟ್ಟಿದರು. ೧೪ ಸಂಚಿಕೆಗಳೂ ಓದುಗರ ಮೆಚ್ಚುಗೆಗೆ ಪಾತ್ರವಾದವು.ಬಳಿಕ “ಜೀವನದ ರಂಗೋಲಿ ಹಾದಿಯ ಪಯಣದಲ್ಲಿ” “ಮಾಡಿದ ಕೆಲಸವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿಯೂ ನಿರ್ಮಾಣಗೊಂಡಿತು” ಹಿರಿಯರ ಸಲಹೆ-ಮಾರ್ಗದರ್ಶನವೇ ನನಗೆ ಶ್ರೀ ರಕ್ಷೆಯಾಯಿತು. ಪ್ರಸ್ತುತ “ರಂಗೋಲಿ ಕಲೆಗಾಗಿ ವೆಬ್ ಸ್ಯೆಟ್ ” ತೆರೆದು ರಂಗೋಲಿಯ ಗ್ಯಾಲರಿಯಲ್ಲಿ ಇದ್ದೇವೆ..
ರಂಗು ರಂಗಿನ ರಂಗೋಲಿಯ ರಂಗುಗಳನ್ನು ಇದರಲ್ಲಿ ತೆರೆದಿರಿಸಿದ್ದೇನೆ.

rangolijanapada.com,rangoli  created by  artist dr.bharathi maravanthe in bynduuru udupi district. rangolijanapada.com
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಡಾ.ಭಾರತಿ ಮರವಂತೆ ರಚಿಸಿದ ರಂಗೋಲಿ ಚಿತ್ತಾರ. ಕಾರ್ಯಕ್ರಮ ಆಯೋಜಿಸಿದ ಶ್ರೀ.ಗಣಪತಿ ಹೋಬ್ಳಿದಾರ್ ಮತ್ತು ಅವರ ಬಳಗದವರಿಗೆ ವಂದನೆಗಳು
rangolijanapada.com,rangoli  created by  artist dr.bharathi maravanthe in bynduuru udupi district. rangolijanapada.com
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಡಾ.ಭಾರತಿ ಮರವಂತೆ ರಚಿಸಿದ ರಂಗೋಲಿ ಚಿತ್ತಾರ. ಕಾರ್ಯಕ್ರಮ ಆಯೋಜಿಸಿದ ಶ್ರೀ.ಗಣಪತಿ ಹೋಬ್ಳಿದಾರ್ ಮತ್ತು ಬಳಗದವರಿಗೆ ವಂದನೆಗಳು
rangolijanapada.com,rangoli created by artist bharathi maravanthe in maravanthe organised kannada samskruthi department udupi, rangolijanapada.com
rangolijanapada.com, rangoli created by artist dr.bharathi maravanthe, in kundapur udupi district, rangolijanapada.com
ಸಮಯ ಚಾನೆಲ್ ನವರು ಡಾ.ಭಾರತಿ ಮರವಂತೆಯವರ ಸಂದರ್ಶನಕ್ಕೆ ಬಂದ ಸಂದರ್ಭದಲ್ಲಿ ರಚಿಸಿದ ರಂಗೋಲಿ ಚಿತ್ತಾರ. ಸಮಯ ಚಾನೆಲ್ ಬಳಗದವರಿಗೆ ಧನ್ಯವಾದಗಳು
rangolijanapada.com, rangoli created by artist dr. bharathi maravanthe, in bangalore. rangolijanapada.com

ನನ್ನಧ್ವನಿ : “ರಂಗೋಲಿ ಭಾರತದ ಶುಧ್ದ ಜನಪದ ಕಲೆಯಾಗಿದೆ, ಮೂಲತಹ ಇದಕ್ಕೆ “ಸೇಡಿ ಬರೆಯುವುದು” “ಗೀಟ್ ಹಾಕುವುದು” ಎನ್ನುತ್ತಿದ್ದರು. ಹಳ್ಳಿಯಲ್ಲಿ ಪ್ರತಿನಿತ್ಯ ಅಂಗಳದಲ್ಲಿ, ಹೊಸ್ತಿಲಿನಲ್ಲಿ ಜಾತಿ-ಮತ-ಕಟ್ಟುಪಾಡುಗಳನ್ನು ಮೀರಿ ಕೋಟಿ ಕೋಟಿ ರಂಗೋಲಿಗಳು ಅರಳುತ್ತವೆ, ಸಂಜೆ ಮುದುಡುತ್ತವೆ. ಇಂದಿಗೂ ಕೆಲವು ಹಳ್ಳಿಯ ಮುಗ್ಧ ಜನರು ಗೀಟ್ ಹಾಕುವುದು ಎನ್ನುವ ಪದ ಬಳಸುತ್ತಾರೆ. ಬುಡಕಟ್ಟು ಸಮುದಾಯದ ಗಾಮೊಕ್ಕಲಿಗರು ಸೇಡಿ ಬರೆಯುವುದು ಎನ್ನುವ ಪದ ಬಳಕೆಯಲ್ಲಿ ಗೋಡೆಯಲ್ಲಿ ಚಿತ್ರಿಸುತ್ತಾರೆ. ಹಾಲಕ್ಕಿ ಜನ ಸಮುದಾಯದವರು ಇಂದಿಗೂ ಹೊಸ್ತಿಲಿಗೆ ಸೇಡಿ ಮೂಲಕ ಹಲಿ ಬರೆಯುತ್ತಾರೆ. ರಂಗೋಲಿ ಕಲೆಯನ್ನು ಧಾರ್ಮಿಕ ಕಲೆ ಎಂದು ಬಿಂಬಿಸಲಾಗುತ್ತಿದೆ. ಆದರೆ ರಂಗೋಲಿಯ ವಿನ್ಯಾಸಗಳಲ್ಲಿ, ಉದ್ದೇಶಗಳಲ್ಲಿ ಧಾರ್ಮಿಕ ಅಂಶಗಳಿವೆ ನಿಜ. ನಮ್ಮ ಭಾರತದ ಎಲ್ಲಾ ಜನಪದ ಕಲೆಗಳಲ್ಲಿಯೂ ಮುಗ್ಧ ಜನರ ಭಕ್ತಿಯ,ಆರಾಧನೆಯ ಅಂಶಗಳನ್ನು ಕಾಣುತ್ತೇವೆ.ರಂಗೋಲಿ ಎನ್ನುವ ಪದ ಸಂಸ್ಕೃತೀಕರಣಗೊಂಡ ಪದವಾಗಿದೆ. ಈ ಕಾರಣಕ್ಕಾಗಿ ಈ ಕಲೆಯನ್ನು ಒಂದು ಸಮುದಾಯಕ್ಕೆ ಸಿಇಮಿತವಾದ ಕಲೆ ಎಂದು ಬಿಂಬಿಸಿದರೆ ಕಲೆಗೆ ಮಾಡುವ ಅನ್ಯಾಯವಾಗುತ್ತದೆ. ಈ ಕಳೆಯ ಇನ್ನೊಂದು ಮುಖವೇ “ಮಂಡಲಗಳು”. ಇದನ್ನೂ ಕೂಡಾ ಕಾಡ್ಯನಾಟದಂತಹ ಇನ್ನೂ ಅನೇಕ ಆಚರಣೆಗಳಲ್ಲಿ ಬುಡಕಟ್ಟು ಸಮುದಾಯದವರು ಮಂಡಲಗಳನ್ನು ರಚಿಸಿದ್ದು ದಾಖಲಾಗಿದೆ. ಭೂತಾರಾಧನೆಯಲ್ಲಿ ಚಿಕ್ಕ ಚಿಕ್ಕ ಮಂಡಲಗಳ ರೇಖೆಗಳನ್ನು ಚಿತ್ರಿಸುವುದು ಕಂಡು ಬರುತ್ತದೆ ಇನ್ನು “ಹಸೆ ಚಿತ್ತಾರ”ದ ಬಗ್ಗೆನೂ ಗೊಂದಲಗಳನ್ನು ಸೃಷ್ಟಿ ಮಾಡಲಾಗುತ್ತಿದೆ. “ಹಸೆ” ಎನ್ನುವ ಪದದ ಅರ್ಥವೇ ಚಾಪೆ ಎಂದಾಗಿದೆ. ಮದುವೆ ಸಂದರ್ಭದಲ್ಲಿ ಬಿಡಿಸುವ ಚಿತ್ರವೇ ಹಸೆ ಚಿತ್ತಾರವಾಗಿದೆ. ಬುಡಕಟ್ಟು ಸಮುದಾಯದವರು ವಿಶೇಷವಾಗಿ ಗೋಡೆ ಮೇಲೆ ಮತ್ತು ನೆಲದ ಮೇಲೆ ಚಿತ್ರಿಸುತ್ತಾರೆ. ನಾಗರೀಕತೆಗೆ ಒಗ್ಗಿಕೊಂಡ ಸಾಮಾನ್ಯ ಜನಸಮುದಾಯದವರು ಕರೆಯುವ ಹೆಸರುಗಳಲ್ಲಿ ಭಿನ್ನತೆಗಳಿವೆ” ರಂಗೋಲಿ ಕಲೆ ನಮ್ಮ ಭಾರತದ ವಿವಿಧ ರಾಜ್ಯಗಳಲ್ಲಿ ಪೂಕಳಂ, ಅಲ್ಪನಾ, ಕೋಲಮ್, ಮುಗ್ಗುಲು, ರಂಗೋಳಿ, ರಂಗೋಲಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ೨೦ ವರ್ಷಗಳಿಂದ ಈ ಕಲೆಯಲ್ಲಿನ “ಅಧ್ಯಯನ-ಸಂಶೋಧನೆಯ ಹಿನ್ನೆಲೆಯಲ್ಲಿ” ನಾನು ಕಂಡುಕೊಂಡ ಸತ್ಯವನ್ನು ಈ web site ಮೂಲ ಹೇಳ ಹೊರಟಿದ್ದೇನೆ.
ಆಧುನೀಕರಣದ ನಾಗಾಲೋಟದಲ್ಲಿ ನಾವಿಂದು ಇಂತಹ ಕಲೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಇದರ ನಡುವೆ ನಾವು ಮಾಡಿದ ಕೆಲಸವನ್ನು ಹೋರಾಟದ ಮೂಲಕ ನಮ್ಮತನವನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಇನ್ನೂ ಬೇಸರ ತರುತ್ತದೆ. ಉಡುಪಿಯ ರಂಗವಲ್ಲಿ ಬ್ರಹ್ಮ ಬಿ.ಪಿ.ಬಾಯಿರಿ ಸಾಕಷ್ಟು ರಂಗೋಲಿ ಚಿತ್ರಗಳನ್ನು ಸಂಗ್ರಹ ಮತ್ತು ಸ್ವರಚನೆ ಮಾಡಿದ್ದರು. ಆದರೆ ಇಂದು ಆ ಚಿತ್ರಗಳು ಯಾರದ್ದೋ ಹೆಸರಲ್ಲಿ ನಕಲಾಗಿಪ್ರಕಟಣೆಗೊಳ್ಳುತ್ತಿವೆ. ಇದು ಬಹಳ ಬೇಸರ ತರುವ ಸಂಗತಿ. ಈ ಕಾರಣಕ್ಕಾಗಿ ಈ website ನಲ್ಲಿ ಒಂದು blogಗೆ ಅವರಿಗೆ ಗೌರವ ಸಲ್ಲಿಸಲು ಅವರ ಹೆಸರನ್ನು ಇಟ್ಟಿದ್ದೇನೆ. ರಂಗೋಲಿ ಕೂಡಾ ಒಂದು ಜನಪದ ಕಲೆ. ಅವರವರ ಶ್ರಮ ಅವರವರಿಗೆ ಸಲ್ಲಬೇಕು”ರಂಗೋಲಿ ಕಲೆಯು ತನ್ನ ಮೂಲ ಸ್ವರೂಪವನ್ನು ಇಟ್ಟುಕೊಂಡು ಜಾಗತೀಕರಣಕ್ಕೆ ಅನುಗುಣವಾಗಿ ಬೆಳೆಯಬೇಕಾಗಿದೆ.ದಿನಬೆಳಗಾದರೆ ರಂಗೋಲಿ ಮೂಲಕ ಅರಳುವ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಮುಗ್ಧ ಮಕ್ಕಳು ಅರಿಯಬೇಕಾಗಿದೆ. ಈ ಕಲೆಯು ಶಾಲಾ ಶಿಕ್ಷಣದಲ್ಲಿ ಸೇರ್ಪಡೆಯಾಗಬೇಕು,. ಡಾ.ಭಾರತಿ ಮರವಂತೆ