
ಜನಪದ ಕಲೆಯಾಗಿರುವ ರಂಗೋಲಿ ಕಲೆ ಭಾರತೀಯ ಸಂಸ್ಕೃತಿಯ ಪ್ರತೀಕ. ಗೊಡ್ಡು ಸಂಪ್ರದಾಯ ಎನ್ನುವ ಭಾವನೆಯಿದ್ದರೂ ಕೂಡ ಈ ಕಲೆ ತನ್ನದೇ ಆದ ವಿಶಿಷ್ಟತೆ ಪಡೆದಿದೆ. ಸಾಮಾಜಿಕ ಸಂದೇಶ, ಒಗ್ಗಟ್ಟು, ಏಕತೆಯನ್ನು ಸಾರುವ ಶಕ್ತಿ ಈ ಕಲೆಗೆ ಇದೆ. ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದ ಈ ಕಲೆ ಪ್ರಸ್ತುತ ಜಾಗತೀಕರಣಕ್ಕೆ ಹೊಂದಿಕೊಂಡು ಬೆಳೆಯುತ್ತಿದೆ. ವಿದ್ಯಾರ್ಥಿಗಳಿಗೆ ಈ ಕಳೆಯ ಬಗ್ಗೆ ಅಸಡ್ಡೆ ಬರುತ್ತಿದೆ. ಈ ಹಿನ್ನೆಲೆಯಿಂದ ೨೦೦೦ನೆಯ ವರ್ಷದಿಂದ ಪ್ರಸ್ತುತದವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ರಂಗೋಲಿ ಕಳೆಯ ತರಬೇತಿಯನ್ನು ನನ್ನ ಬಿಡುವಿನ ದಿನಗಳಲ್ಲಿ ನೀಡುತ್ತಾ ಬಂದಿದ್ದೇನೆ. ಸುಮಾರು ೫,೦೦೦ ವಿದ್ಯಾರ್ಥಿಗಳಿಗೂ ಹೆಚ್ಚು ಈ ಕಳೆಯ ತರಬೆತಿ ಪಡೆದಿದ್ದಾರೆ. ರಂಗೋಲಿಯು ಒಂದು ಜನಪದ ಕಲೆ, ನಮ್ಮ ಸಂಸ್ಕೃತಿ ಎನ್ನುವ ಗೌರವ ಶಾಲಾ ಮಕ್ಕಳಿಗೆ ಬಂದರೆ ಅದೇ ಗೌರವವನ್ನು ಉಳಿಸಿಕೊಂಡು ಹೋಗುತ್ತಾರೆ, ಅದೇ ಈ ಕಲೆಗೆ ಸಿಗುವ ಗೌರವ ಮತ್ತು ಹೇಗೋ ಒಂದು ಕಡೆ ಉಳಿದುಕೊಂಡು ಉಳಿಯುತ್ತಾ ಬೆಳೆಯುತ್ತಾ ಹೋಗುತ್ತದೆ —- ಡಾ.ಭಾರತಿ ಮರವಂತೆ








