ಬಾಲ್ಯದಿಂದಲೇ ರಂಗೋಲಿ ಪ್ರದರ್ಶನ ಸಂಗ್ರಹ ಎಂದಾಗ ರಂಗೋಲಿಯಲ್ಲಿ ಏನಿದೆ? ಅದರ ಹಿಂದೆ ಯಾಕೆ ಹೋಗ್ತೀರಿ? ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿರಿ ಎಂದು ಅನೇಕರು ಸಲಹೆ ನೀಡಿದ್ದರು . ಆದರೆ ಅದೇನೂ ಗೊತ್ತಿಲ್ಲ. ಸಾಕಷ್ಟು ನೋಡುಗರು ಮೆಚ್ಚುವಂತೆ ಕಲೆಯನ್ನು ಪ್ರದರ್ಶಿಸುವ ಅವಕಾಶಗಳು ದೊರೆತವು. ರಂಗೋಲಿಯ ಬಣ್ಣಗಳು ಗೆರೆಗಳು ಕಲಾ ಆಸಕ್ತರನ್ನು ಆಕರ್ಷಿಸಿದವು. ರಂಗೋಲಿಯನ್ನು ಬಣ್ಣಗಳ ಮೂಲಕ ಮತ್ತು ಅದನ್ನೇ ಕ್ಯಾನ್ವಾಸ್ ನಲ್ಲಿ ರಚಿಸಿದ ಪ್ರಯೋಗಗಳು ನನಗೆ ಯಶಸ್ಸನ್ನು ತಂದುಕೊಟ್ಟವು. ಕಲಾ ಪ್ರದರ್ಶನ ಮಾಡಿದ ಕೆಲವೇ ತುಣುಕುಗಳನ್ನು ಇಲ್ಲಿ ನೋಡುಗರಿಗೆ ತೆರೆದಿರಿಸಿದ್ದೇನೆ. ನೋಡುಗರು ಮೆಚ್ಚಿಕೊಂಡರೆ ಜೀವನ ಸಾರ್ಥಕ. —— ಡಾ.ಭಾರತಿ ಮರವಂತೆ