ರಂಗೋಲಿ ಕಲೆಯನ್ನು ಅನೇಕರು ಅದು ಧಾರ್ಮಿಕ ಕಲೆ, ಮೇಲ್ವರ್ಗದವರ ಕಲೆ ಎಂದು ಮೂಗು ಮುರಿದವರಿದ್ದಾರೆ. ಆದರೆ ರಂಗೋಲಿ ಶುದ್ಧ ಜನರೇ ರಚಿಸಿದ ಅರ್ಥಪೂರ್ಣ ಕಲೆಯಾಗಿದೆ. ಮನೆ ಮುಂದೆ ಹೆಣ್ಣು ಮಕ್ಕಳು ಬೆಳಿಗ್ಗೆ ಎದ್ದ ಕೂಡಲೇ ಅವರ ಪ್ರಥಮ ದಿನಚರಿಯೇ ನೀರನ್ನು ಅಂಗಳಕ್ಕೆ ಎರಚಿ ಎಲೆಯಿಂದಲೂ ಚುಕ್ಕೆಯಿಂದಲೋ ರಂಗೋಲಿ ಹಾಕುತ್ತಾರೆ. ಇಲ್ಲಿ ಭಾಷೆ, ವರ್ಗ, ಪ್ರದೇಶ ಎನ್ನುವ ಭೇದಭಾವ ಇಲ್ಲದೆ ತಮ್ಮ ತಂದೆ ತಾಯಿ ಹೇಳಿಕೊಟ್ಟ ಚಿತ್ರ ತೆಗೆಯುತ್ತಾರೆ ಮತ್ತು ಅದೊಂದು ಸಂಪ್ರದಾಯ ಎನ್ನುವುದು ಮಾತ್ರ ಅವರಿಗೆ ಗೊತ್ತು. ನಮ್ಮ ಹಿಂದಿನ ತಲೆಮಾರಿನವರು ರಚಿಸಿದ ಚಿತ್ರಗಳು ಅರ್ಥಪೂರ್ಣ. ಅವುಗಳ ಸಂಗ್ರಹ ಆಗಬೇಕಾಗಿದೆ. ಇದರೊಂದಿಗೆ ರಂಗೋಲಿ ಚಿತ್ರಗಳನ್ನು ಸ್ವಂತವಾಗಿ ರಚಿಸುವ ರಂಗೋಲಿ ಕಲಾವಿದರೂ ನಮ್ಮಲ್ಲಿದ್ದಾರೆ. ಈ ಸ್ವಂತ ರಚನೆಯ ಹವ್ಯಾಸಕ್ಕೆ ನನಗೆ ಪ್ರೋತ್ಸಾಹ ನೀಡಿದವರು ತರಂಗ ವಾರ ಪತ್ರಿಕೆ. ೧೯೯೯ರಲ್ಲಿಯೇ ನನ್ನ ರಂಗೋಲಿಗಳು ಪ್ರಕಟಗೊಂಡಿದ್ದವು. ಅನಂತರ ಕುಂದಪ್ರಭ ವಾರಪತ್ರಿಕೆಯಲ್ಲಿ ನೂರಾರು ರಂಗೋಲಿಗಳು ಓದುಗರ ಮೆಚ್ಚುಗೆಗೆ ಪಾತ್ರವಾದವು. ಸಂಯುಕ್ತ ಕರ್ನಾಟಕ, ಅಕ್ಷರ ಸರಸ್ವತಿ ಈ ಎಲ್ಲಾ ಪತ್ರಿಕೆಗಳಲ್ಲಿ ಅಂಕಣವಾಗಿ ಪ್ರಕಟಣೆಗೊಂಡವು. ಇದಕ್ಕೆ ಪ್ರೇರಣೆ ನೀಡಿದವರು ನಾನು ಉಡುಪಿಯಲ್ಲಿ ಚಿತ್ರಕಲಾ ಕಾಲೇಜಿನಲ್ಲಿ ಓದುತ್ತಿರುವಾಗ ಶ್ರೀ.ವಿಶ್ವೇಶ್ವರ ಪರ್ಕಳ, ಶ್ರೀ ಮೋಹನ ಕಡಬ, ಶ್ರೀ.ಕೆ.ಎಲ್ ಭಟ್ ಗುರುಗಳು. ನಾನು ರಚಿಸಿದ ಚಿತ್ರಗಳನ್ನು ತಿದ್ದಿ ಸರಿಪಡಿಸುತ್ತಿದ್ದರು. ಅಲ್ಲಿಯ ನಿರ್ದೇಶಕರಾದ ಯು.ನಿರಂಜನ ಅವರು ನನ್ನ ರಂಗೋಲಿ ಪ್ರದರ್ಶನ-ಸ್ವಂತ ರಂಗೋಲಿ ಚಿತ್ರದ ರಚನೆಗಳಿಗೆ ಬೆನ್ನು ತಟ್ಟಿ ಪ್ರೋತ್ಸಹಿಸಿದವರು. ಇಲ್ಲಿ ನಾನು ರಚಿಸಿದ ಕೆಲವು ರಂಗೋಲಿಗಳನ್ನು ತಮ್ಮ ಮುಂದೆ ತೆರೆದಿಡುತ್ತಿದ್ದೇನೆ. —- ಭಾಮ

ರಂಗೋಲಿ ರಚನೆ ಡಾ.ಭಾರತಿ ಮರವಂತೆ
ನನ್ನ ರಂಗೋಲಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ತರಂಗ ವಾರ ಪತ್ರಿಕೆ -೧೯೯೮ಗೆ ವಂದನೆಗಳು

ರಂಗೋಲಿ ರಚನೆ ಡಾ.ಭಾರತಿ ಮರವಂತೆ
ನನ್ನ ರಂಗೋಲಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ತರಂಗ ವಾರ ಪತ್ರಿಕೆ -೧೯೯೮ಗೆ ವಂದನೆಗಳು

ನನ್ನ ರಂಗೋಲಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ತರಂಗ ವಾರ ಪತ್ರಿಕೆ -೧೯೯೮ಗೆ ವಂದನೆಗಳು


