ನೆಲಮೂಲ ಸಂಸ್ಕೃತಿಯನ್ನು ಉಳಿಸುವ ಕಲೆ-ಸಾಹಿತ್ಯ-ಹಬ್ಬಗಳು -ಆಚರಣೆಗಳು -ಕಲಾವಿದರು ಇತ್ಯಾದಿಗಳ ಸುದ್ದಿಗಳ ಪ್ರಸಾರಕ್ಕೆ ಈ ವೇದಿಕೆ

rangolijanapada.com, rangoli festival organised by the inner club and mahila vedike, kota, udupi district, thanks to the organisers
2018ರಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಇನ್ನರ್ ಕ್ಲಬ್ ಮತ್ತು ಮಹಿಳಾ ವೇದಿಕೆಯವರು ಸಂಯೋಜಿಸಿದ “ರಂಗೋಲಿ ಹಬ್ಬದ” ಅಪೂರ್ವ ದೃಶ್ಯಾವಳಿ. ಚಿತ್ರದಲ್ಲಿ ಸ್ಪರ್ಧಾಳುಗಳು ರಂಗೋಲಿ ಬಿಡಿಸುತ್ತಿರುವುದನ್ನು ಕಾಣಬಹುದು. ಆಸಕ್ತರಿಗೆ
ಪ್ರೇರಣೆ ನೀಡಿದ ಈ ಕಾರ್ಯಕ್ರಮದ ಸಂಯೋಜಕರಿಗೆ ಅಭಿನಂದನೆಗಳು
rangolijanapada.com, inauguration of rangoli training programme in  bombay-kannada mathungha.
ಕರ್ನಾಟಕ ಸಂಘ ಮುಂಬಯಿ, ಮಹಿಳಾ ವಿಭಾಗದವರು ರಂಗೋಲಿ ತರಬೇತಿ ಕಾರ್ಯಕ್ರಮ ಆಯೋಜನೆಯ ಉದ್ಘಾಟನೆಯ ದೃಶ್ಯ. ಚಿತ್ರದಲ್ಲಿ ಭಾರತಿ ಮರವಂತೆ
ಮತ್ತು ಕಾರ್ಯಕ್ರಮ ಆಯೋಜಿಸಿದ ಮಹಿಳಾ ವಿಭಾಗದ ಸಂಘಟಕರನ್ನು ಕಾಣಬಹುದು.
rangolijanapada.com, manipal university programme, attraction rangoli created by manipal university students. -dr.bharathi maravanthe
ಉಡುಪಿ ಜಿಲ್ಲೆಯ ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವರ್ಷ ಉಡುಪಿ ಉತ್ಸವ್ ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮ : ರಂಗೋಲಿ ಸ್ಪರ್ಧೆಯಲ್ಲಿ ವಿದ್ದ್ಯಾರ್ಥಿಗಳು ರಚಿಸಿದ ಆಕರ್ಷಕವಾದ ರಂಗೋಲಿಗಳಿವೆ. ಡಾ.ಭಾರತಿ ಮರವಂತೆ ಮತ್ತು ಸಂಪನ್ಮೂಲ ವ್ಯಕ್ತಿಗಳು ತೀರ್ಪುಗಾರರಾಗಿ ಛಾಯಾಚಿತ್ರದಲ್ಲಿದ್ದಾರೆ . ಮಣಿಪಾಲ ವಿ.ವಿ.ಯ ಸಂಘಟಕರಿಗೆ ಧನ್ಯವಾದಗಳು.

ನನ್ನಧ್ವನಿ : “ರಂಗೋಲಿ ಭಾರತದ ಶುಧ್ದ ಜನಪದ ಕಲೆಯಾಗಿದೆ, ಮೂಲತಹ ಇದಕ್ಕೆ “ಸೇಡಿ ಬರೆಯುವುದು” “ಗೀಟ್ ಹಾಕುವುದು” ಎನ್ನುತ್ತಿದ್ದರು. ಹಳ್ಳಿಯಲ್ಲಿ ಪ್ರತಿನಿತ್ಯ ಅಂಗಳದಲ್ಲಿ, ಹೊಸ್ತಿಲಿನಲ್ಲಿ ಜಾತಿ-ಮತ-ಕಟ್ಟುಪಾಡುಗಳನ್ನು ಮೀರಿ ಕೋಟಿ ಕೋಟಿ ರಂಗೋಲಿಗಳು ಅರಳುತ್ತವೆ, ಸಂಜೆ ಮುದುಡುತ್ತವೆ. ಇಂದಿಗೂ ಕೆಲವು ಹಳ್ಳಿಯ ಮುಗ್ಧ ಜನರು ಗೀಟ್ ಹಾಕುವುದು ಎನ್ನುವ ಪದ ಬಳಸುತ್ತಾರೆ. ಬುಡಕಟ್ಟು ಸಮುದಾಯದ ಗಾಮೊಕ್ಕಲಿಗರು ಸೇಡಿ ಬರೆಯುವುದು ಎನ್ನುವ ಪದ ಬಳಕೆಯಲ್ಲಿ ಗೋಡೆಯಲ್ಲಿ ಚಿತ್ರಿಸುತ್ತಾರೆ. ಹಾಲಕ್ಕಿ ಜನ ಸಮುದಾಯದವರು ಇಂದಿಗೂ ಹೊಸ್ತಿಲಿಗೆ ಸೇಡಿ ಮೂಲಕ ಹಲಿ ಬರೆಯುತ್ತಾರೆ. ರಂಗೋಲಿ ಕಲೆಯನ್ನು ಧಾರ್ಮಿಕ ಕಲೆ ಎಂದು ಬಿಂಬಿಸಲಾಗುತ್ತಿದೆ. ಆದರೆ ರಂಗೋಲಿಯ ವಿನ್ಯಾಸಗಳಲ್ಲಿ, ಉದ್ದೇಶಗಳಲ್ಲಿ ಧಾರ್ಮಿಕ ಅಂಶಗಳಿವೆ ನಿಜ. ನಮ್ಮ ಭಾರತದ ಎಲ್ಲಾ ಜನಪದ ಕಲೆಗಳಲ್ಲಿಯೂ ಮುಗ್ಧ ಜನರ ಭಕ್ತಿಯ,ಆರಾಧನೆಯ ಅಂಶಗಳನ್ನು ಕಾಣುತ್ತೇವೆ.ರಂಗೋಲಿ ಎನ್ನುವ ಪದ ಸಂಸ್ಕೃತೀಕರಣಗೊಂಡ ಪದವಾಗಿದೆ. ಈ ಕಾರಣಕ್ಕಾಗಿ ಈ ಕಲೆಯನ್ನು ಒಂದು ಸಮುದಾಯಕ್ಕೆ ಸಿಇಮಿತವಾದ ಕಲೆ ಎಂದು ಬಿಂಬಿಸಿದರೆ ಕಲೆಗೆ ಮಾಡುವ ಅನ್ಯಾಯವಾಗುತ್ತದೆ. ಈ ಕಳೆಯ ಇನ್ನೊಂದು ಮುಖವೇ “ಮಂಡಲಗಳು”. ಇದನ್ನೂ ಕೂಡಾ ಕಾಡ್ಯನಾಟದಂತಹ ಇನ್ನೂ ಅನೇಕ ಆಚರಣೆಗಳಲ್ಲಿ ಬುಡಕಟ್ಟು ಸಮುದಾಯದವರು ಮಂಡಲಗಳನ್ನು ರಚಿಸಿದ್ದು ದಾಖಲಾಗಿದೆ. ಭೂತಾರಾಧನೆಯಲ್ಲಿ ಚಿಕ್ಕ ಚಿಕ್ಕ ಮಂಡಲಗಳ ರೇಖೆಗಳನ್ನು ಚಿತ್ರಿಸುವುದು ಕಂಡು ಬರುತ್ತದೆ ಇನ್ನು “ಹಸೆ ಚಿತ್ತಾರ”ದ ಬಗ್ಗೆನೂ ಗೊಂದಲಗಳನ್ನು ಸೃಷ್ಟಿ ಮಾಡಲಾಗುತ್ತಿದೆ. “ಹಸೆ” ಎನ್ನುವ ಪದದ ಅರ್ಥವೇ ಚಾಪೆ ಎಂದಾಗಿದೆ. ಮದುವೆ ಸಂದರ್ಭದಲ್ಲಿ ಬಿಡಿಸುವ ಚಿತ್ರವೇ ಹಸೆ ಚಿತ್ತಾರವಾಗಿದೆ. ಬುಡಕಟ್ಟು ಸಮುದಾಯದವರು ವಿಶೇಷವಾಗಿ ಗೋಡೆ ಮೇಲೆ ಮತ್ತು ನೆಲದ ಮೇಲೆ ಚಿತ್ರಿಸುತ್ತಾರೆ. ನಾಗರೀಕತೆಗೆ ಒಗ್ಗಿಕೊಂಡ ಸಾಮಾನ್ಯ ಜನಸಮುದಾಯದವರು ಕರೆಯುವ ಹೆಸರುಗಳಲ್ಲಿ ಭಿನ್ನತೆಗಳಿವೆ” ರಂಗೋಲಿ ಕಲೆ ನಮ್ಮ ಭಾರತದ ವಿವಿಧ ರಾಜ್ಯಗಳಲ್ಲಿ ಪೂಕಳಂ, ಅಲ್ಪನಾ, ಕೋಲಮ್, ಮುಗ್ಗುಲು, ರಂಗೋಳಿ, ರಂಗೋಲಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ೨೦ ವರ್ಷಗಳಿಂದ ಈ ಕಲೆಯಲ್ಲಿನ “ಅಧ್ಯಯನ-ಸಂಶೋಧನೆಯ ಹಿನ್ನೆಲೆಯಲ್ಲಿ” ನಾನು ಕಂಡುಕೊಂಡ ಸತ್ಯವನ್ನು ಈ web site ಮೂಲ ಹೇಳ ಹೊರಟಿದ್ದೇನೆ.
ಆಧುನೀಕರಣದ ನಾಗಾಲೋಟದಲ್ಲಿ ನಾವಿಂದು ಇಂತಹ ಕಲೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಇದರ ನಡುವೆ ನಾವು ಮಾಡಿದ ಕೆಲಸವನ್ನು ಹೋರಾಟದ ಮೂಲಕ ನಮ್ಮತನವನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಇನ್ನೂ ಬೇಸರ ತರುತ್ತದೆ. ಉಡುಪಿಯ ರಂಗವಲ್ಲಿ ಬ್ರಹ್ಮ ಬಿ.ಪಿ.ಬಾಯಿರಿ ಸಾಕಷ್ಟು ರಂಗೋಲಿ ಚಿತ್ರಗಳನ್ನು ಸಂಗ್ರಹ ಮತ್ತು ಸ್ವರಚನೆ ಮಾಡಿದ್ದರು. ಆದರೆ ಇಂದು ಆ ಚಿತ್ರಗಳು ಯಾರದ್ದೋ ಹೆಸರಲ್ಲಿ ನಕಲಾಗಿಪ್ರಕಟಣೆಗೊಳ್ಳುತ್ತಿವೆ. ಇದು ಬಹಳ ಬೇಸರ ತರುವ ಸಂಗತಿ. ಈ ಕಾರಣಕ್ಕಾಗಿ ಈ website ನಲ್ಲಿ ಒಂದು blogಗೆ ಅವರಿಗೆ ಗೌರವ ಸಲ್ಲಿಸಲು ಅವರ ಹೆಸರನ್ನು ಇಟ್ಟಿದ್ದೇನೆ. ರಂಗೋಲಿ ಕೂಡಾ ಒಂದು ಜನಪದ ಕಲೆ. ಅವರವರ ಶ್ರಮ ಅವರವರಿಗೆ ಸಲ್ಲಬೇಕು”ರಂಗೋಲಿ ಕಲೆಯು ತನ್ನ ಮೂಲ ಸ್ವರೂಪವನ್ನು ಇಟ್ಟುಕೊಂಡು ಜಾಗತೀಕರಣಕ್ಕೆ ಅನುಗುಣವಾಗಿ ಬೆಳೆಯಬೇಕಾಗಿದೆ.ದಿನಬೆಳಗಾದರೆ ರಂಗೋಲಿ ಮೂಲಕ ಅರಳುವ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಮುಗ್ಧ ಮಕ್ಕಳು ಅರಿಯಬೇಕಾಗಿದೆ. ಈ ಕಲೆಯು ಶಾಲಾ ಶಿಕ್ಷಣದಲ್ಲಿ ಸೇರ್ಪಡೆಯಾಗಬೇಕು,. ಡಾ.ಭಾರತಿ ಮರವಂತೆ