ರಂಗೋಲಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಗೊಡ್ಡು ಸಂಪ್ರದಾಯದ ಈ ಕಲೆಯ ಅಧ್ಯಯನದ ಕುರಿತು ತಿರಸ್ಕರಿಸಿದವರೇ ಹೆಚ್ಚು . ಎಲ್ಲದಕ್ಕಿಂತ ಹೆಚ್ಚಾಗಿ ರಂಗೋಲಿಯಲ್ಲಿ ಏನಿದೆ? ಎನ್ನುವವರ ಪ್ರಶ್ನೆಗಳಿಗೆ ಉತ್ತರಿಸುವುದೇ ಒಂದು ಸವಾಲಾಗಿತ್ತು. ಆದರೆ ಈ ಕಲೆಯಲ್ಲಿ ಸಂಸ್ಕೃತಿ ಇದೆ ಅನ್ನೋದನ್ನು ಎಲ್ಲರೂ ಒಪ್ಪಿಕೊಂಡವರೇ ಆದರೆ ಅಧ್ಯಯನ ಅಂದಾಗ ಪ್ರಶ್ನೆಗಳ ಸುರಿಮಳೆ . ಆದರೆ ಇತರ ಕಲೆಗಳೊಂದಿಗೆ ರಂಗೋಲಿಗೂ ಒಂದು ಸ್ಥಾನ ನೀಡಿ ನನ್ನನ್ನು ಒಂದು ಹಂತದಲ್ಲಿ ಬೆಳೆಸಿದವರು ಸಮಾಜದ ಅಭಿಮಾನಿಗಳು . ಅವರು ನೀಡಿದ ವೇದಿಕೆಗಳನ್ನು ಒಂದಿಷ್ಟು ಹಂತದಲ್ಲಿ ಬಳಸಿಕೊಂಡೆ , ಅವರ ಪ್ರೋತ್ಸಾಹದ ನುಡಿಗಳು ನಾನಿವತ್ತು ಒಂದು ಹಂತದಲ್ಲಿ ಕೆಲಸ ನಿರ್ವಹಿಸಲು ಕಾರಣವಾಗಿದೆ . ಆರಂಭದ ಹಂತದಲ್ಲಿ ರಂಗೋಲಿಯ ಪ್ರದರ್ಶನ ಬಾಲಿಶವಾಗಿ ಇತ್ತು ಅನಂತರದ ದಿನಗಳಲ್ಲಿ ಅಂದರೆ ಪ್ರಸ್ತುಥದಲ್ಲಿ ಹಲವರ ಸಲಹೆ ಮೇರೆಗೆ ಅದಕ್ಕೊಂದು ರೂಪ ಬಂದಿದೆ. ಇನ್ನೂ ಅದರಲ್ಲಿ ಬದಲಾವಣೆ ಮಾಡಬೇಕಾಗಿದೆ . . ಅದರ ಪ್ರತಿಫಲವೇ ಈ ಬ್ಲಾಗ್ ನಲ್ಲಿ “ನಾನು ನಡೆದು ಬಂದ ಒಂದೊಂದೇ ಹೆಜ್ಜೆಗಳ “ವಿಡಿಯೋ ತುಣುಕುಗಳ ಪ್ರಸಾರ. ಅನೇಕ ವಿದ್ಯಾರ್ಥಿಗಳಿಗೂ ಇದು ಪ್ರೇರಣೆಯಾಗಲಿ ನಮಗೆ ಹಿಂದಿನವರು ನೀಡಿದ ರಂಗೋಲಿಯಂಥ ಯಾವುದೇ ಕಲೆಗಳನ್ನು ತಿರಸ್ಕಾರ ಮಾಡದೇ ಅದನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡೋಣ ಎನ್ನುತ್ತಾ ತಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎನ್ನುವುದೇ ನನ್ನ ಕೋರಿಕೆ . . . .

ಪ್ರೇರಕರು : ಈ ನೆಲ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನೆಲೆಯಲ್ಲಿ “ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ” ಸ್ಥಾಪಿತವಾಗಿದೆ . ಪ್ರಸ್ತುತ ಇದೇ ನನ್ನ ವೃತ್ತಿ ಕ್ಷೇತ್ರ. ಇಲ್ಲಿಯ ಕುಲಪತಿಗಳಾಗಿದ್ದ ಪ್ರೊ.ಅಂಬಳಿಕೆ ಹಿರಿಯಣ್ಣ, ಪ್ರೊ.ಚಿನ್ನಪ್ಪ ಗೌಡ ಅವರ ಪ್ರೋತ್ಸಾಹ ಸಲಹೆ ಮಾರ್ಗದರ್ಶನಕ್ಕೆ ಕೃತಜ್ಞತೆಗಳು. ಹಿರಿಯ ಅಧಿಕಾರಿಗಳಾಗಿದ್ದ ಪ್ರೊ.ಸ.ಚಿ.ರಮೇಶ್, ಪ್ರೊ.ಪ್ರೇಮ್ ಕುಮಾರ್ , ಪ್ರೊ.ಮುರಹರಿ ನಾಯಕ್ ಇವರ ಮಾರ್ಗದರ್ಶನಕ್ಕೂ ಋಣಿಯಾಗಿದ್ದೇನೆ. ಪ್ರಸ್ತುತ ಕುಲಪತಿಗಳಾಗಿರುವ ಪ್ರೊ.ಡಿ .ಬಿ.ನಾಯಕ್ ಕುಲಸಚಿವರಾಗಿರುವ ಪ್ರೊ.ಚಂದ್ರಶೇಖರ್ , ಮೌಲ್ಯಮಾಪನ ಕುಲಸಚಿವರಾಗಿರುವ ಡಾ.ಎಂ.ಎನ್.ವೆಂಕಟೇಶ್ ಇವರ ಮಾರ್ಗದರ್ಶನ ಮತ್ತು ಈ ವೆಬ್ ಸೈಟ್ ತೆರೆಯುವಲ್ಲಿ ನೀಡಿದ ಸಲಹೆ ಸೂಚನೆಗಳಿಗೆ ಆಭಾರಿಯಾಗಿದ್ದೇನೆ. ರಂಗೋಲಿ ಕಲೆಯನ್ನು ವಿವಿಧ ದೃಷ್ಟಿಕೋನಗಳಿಂದ ನೋಡುವ ರೀತಿ, ಪ್ರಸ್ತುತ ಪರಿಸ್ಥಿತಿಗೆ ಈ ಕಲೆಯನ್ನು ಅಳವಡಿಸಿಕೊಳ್ಳುವ ಬಗೆ ಇತ್ಯಾದಿ ವಿವಿಧ ನೆಲೆಯಲ್ಲಿ ಯೋಚಿಸುವಂತೆ ಮಾಡುತ್ತಿರುವ ಗುರುಗಳಾದ ಪ್ರೊ.ಚಂದ್ರಪೂಜಾರ್ ಸರ್ ಅವರಿಗೆ ಮನದಾಳದ ಕೃತಜ್ಞತೆಗಳು ———- ಡಾ. ಭಾರತಿ ಮರವಂತೆ